ಹೆಚ್ಚುವರಿ ವಿಮಾನಯಾನಗಳನ್ನು ಪ್ರಕಟಿಸಿದ ಏರ್ ಇಂಡಿಯಾ

ನವದೆಹಲಿ| Ramya kosira| Last Modified ಗುರುವಾರ, 29 ಜುಲೈ 2021 (10:41 IST)
ಕೊರೋನಾ ಕಾರಣಕ್ಕೆ ಒಂದಷ್ಟು ದೇಶಗಳಿಗೆ ವಿಮಾನ ಹಾರಾಟ ನಡೆಸುವುದನ್ನು ಏರ್ ಇಂಡಿಯಾ ಸ್ಥಗಿತಗೊಳಿಸಿತ್ತು. ಈಗ ಪರಿಸ್ಥಿತಿ ತಹಬದಿಗೆ ಬರುತ್ತಿರುವ ಕಾರಣ ಮತ್ತೆ ಹೆಚ್ಚುವರಿ ವಿಮಾನಗಳನ್ನು ಬಿಟ್ಟು ತನ್ನ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ.
ವಿಮಾನಯಾನದ ಮೇಲಿನ ಮೇಲಿನ ನಿರ್ಬಂಧಗಳು ಸರಾಗವಾಗುತ್ತಿದ್ದಂತೆ ಭಾರತದ ರಾಷ್ಟ್ರೀಯ ವಿಮಾನಯಾನ  ಸಂಸ್ಥೆ ಏರ್ ಇಂಡಿಯಾ ವಿವಿಧ ದೇಶಗಳಿಗೆ ಹೆಚ್ಚುವರಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಘೋಷಿಸಿದೆ. ಭಾರತದಿಂದ ಅನೇಕ ನಗರಗಳನ್ನು ಸಂಪರ್ಕಿಸುವ ಕತಾರ್ ಮತ್ತು ಮಾಲ್ಡೀವ್ಸ್ನಂತಹ ದೇಶಗಳಿಗೆ ಏರ್ ಇಂಡಿಯಾ ನೇರ ಹಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ. ಮತ್ತೊಂದೆಡೆ, ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಲೇಷ್ಯಾ ಮತ್ತು ಅನೇಕ ಮಧ್ಯಪ್ರಾಚ್ಯ ಕ್ಷೇತ್ರಗಳಿಗೆ ವಿಮಾನಗಳನ್ನು ಪ್ರಾರಂಭಿಸಿದೆ.
ಮೊದಲನೆಯದಾಗಿ ಕತಾರ್ ಮತ್ತು ಭಾರತ ನಡುವೆ ಆಗಸ್ಟ್ 1 ರಿಂದ 2021 ರ ಅಕ್ಟೋಬರ್ 29 ರವರೆಗೆ ತಡೆರಹಿತ ವಿಮಾನಯಾನ ಹಾರಾಟ ನಡೆಸಲಿದೆ ಎಂದು ಏರ್ ಇಂಡಿಯಾ ಘೋಷಿಸಿದೆ. ಏರ್ ಇಂಡಿಯಾದ ಪ್ರಕಾರ, ಕತಾರ್ಗೆ ಹೋಗುವ ವಿಮಾನ ಮಾರ್ಗದಲ್ಲಿ ಭಾರತದ ಮುಂಬೈ, ಹೈದರಾಬಾದ್, ಕೊಚ್ಚಿ ಮತ್ತು ದೋಹಾ ನಡುವೆ ವಾರಕ್ಕೆ ಎರಡು ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ.
"ಪ್ರಯಾಣಿಸುವವರಿಗೆ ಒಂದಷ್ಟು ಕಾನೂನುಗಳನ್ನು ಮಾಡಿದ್ದು ಅದರ ಜವಾಬ್ದಾರಿಯನ್ನು ಅವರೇ ಹೊರಬೇಕು ಹಾಗೂ ಯಾವುದೇ ಕಾರಣಕ್ಕೆ ಬೋರ್ಡಿಂಗ್ ನಿರಾಕರಿಸಿದಲ್ಲಿ ಏರ್ ಇಂಡಿಯಾ ಅದರ ಹೊಣೆಗಾರಿಕೆಯನ್ನು ಸ್ವೀಕರಿಸುವುದಿಲ್ಲ ”ಎಂದು  ಟ್ವಿಟರ್ನಲ್ಲಿ ತಿಳಿಸಿದೆ.
ಏರ್ ಇಂಡಿಯಾ ಮಂಗಳವಾರ ಮತ್ತು ಗುರುವಾರ ದೋಹಾ-ಕೊಚ್ಚಿ ನಡುವೆ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಲಿದ್ದು, ಕೊಚ್ಚಿ-ದೋಹಾ ವಿಮಾನಗಳು ಬುಧವಾರ ಮತ್ತು ಶುಕ್ರವಾರ ಹಾರಾಟ ನಡೆಸಲಿವೆ. ದೋಹಾ-ಹೈದರಾಬಾದ್ ವಿಮಾನಗಳು ಭಾನುವಾರ ಮತ್ತು ಬುಧವಾರದಂದು ಕಾರ್ಯನಿರ್ವಹಿಸಲಿದ್ದು, ಅದೇ ದಿನಗಳಲ್ಲಿ ರಿಟರ್ನ್ ವಿಮಾನಗಳು ಕಾರ್ಯನಿರ್ವಹಿಸಲಿವೆ. ಏರ್ ಇಂಡಿಯಾ ಬುಧವಾರ ಮತ್ತು ಶುಕ್ರವಾರ ಮತ್ತು ಮುಂಬೈಯಿಂದ ದೋಹಾಕ್ಕೆ ದೋಹಾ-ಮುಂಬೈ ವಿಮಾನಗಳನ್ನು ಕಾರ್ಯಾಚರಣೆಗೆ ಬಿಡಲಿದೆ, ನೇರ ವಿಮಾನಗಳು 5 ದಿನಗಳಲ್ಲಿ ಲಭ್ಯವಿದ್ದು- ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಪ್ರಯಾಣೀಕರು ಇದರ ಲಾಭವನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಮುಂದಿನದು ಜುಲೈ 28 ರಿಂದ ಮಾಲ್ಡೀವ್ಸ್ಗೆ ಹಾರಾಟ ಮತ್ತು ಪ್ರತಿ ಬುಧವಾರ ಮತ್ತು ಶನಿವಾರ ದೆಹಲಿಯಿಂದ ಮಾಲೆಗೆ ಮುಂಬೈ ಮೂಲಕ ವಿಮಾನಯಾನ ನಡೆಸಲಿದೆ. ಜುಲೈ 21, 2021 ರಿಂದ ಪ್ರಾರಂಭವಾಗುವ ಈ ವಿಮಾನಯಾನವು ಪ್ರತಿ ಸೋಮವಾರ ಮತ್ತು ಗುರುವಾರ ಕೇರಳದ ತಿರುವನಂತಪುರಂನಿಂದ ಮಾಲೆಗೆ ಹಾರಾಟ ನಡೆಸಲಿದೆ.
ಅಲ್ಲದೆ, ಏರ್ ಇಂಡಿಯಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಆಗಸ್ಟ್ 2021 ಕ್ಕೆ ಭಾರತ ಮತ್ತು ಕೌಲಾಲಂಪುರ್ ನಡುವೆ ನೇರ ವಿಮಾನಯಾನ ಹಾರಾಟ ನಡೆಸಲಿದೆ ಎಂದು ಘೋಷಿಸಿದೆ. ವಿಮಾನಯಾನವು ತಿರುಚ್ಚಿ, ಕೊಚ್ಚಿ, ಹೈದರಾಬಾದ್, ಮತ್ತು ಚೆನ್ನೈ ಸೇರಿದಂತೆ ಭಾರತೀಯ ನಗರಗಳನ್ನು ಕೌಲಾಲಂಪುರದೊಂದಿಗೆ ಸಂಪರ್ಕಿಸುತ್ತದೆ ಎಂದು ಹೇಳಿದೆ.
ಕೊರೋನಾ ಕಾರಣಕ್ಕೆ ಒಂದಷ್ಟು ದೇಶಗಳಿಗೆ ವಿಮಾನ ಹಾರಾಟ ನಡೆಸುವುದನ್ನು ಏರ್ ಇಂಡಿಯಾ ಸ್ಥಗಿತಗೊಳಿಸಿತ್ತು. ಈಗ ಪರಿಸ್ಥಿತಿ ತಹಬದಿಗೆ ಬರುತ್ತಿರುವ ಕಾರಣ ಮತ್ತೆ ಹೆಚ್ಚುವರಿ ವಿಮಾನಗಳನ್ನು ಬಿಟ್ಟು ತನ್ನ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ.
 
 
ಇದರಲ್ಲಿ ಇನ್ನಷ್ಟು ಓದಿ :