ನವದೆಹಲಿ : ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಬೆದರಿಕೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಕಂಪನಿ ಏರ್ ಇಂಡಿಯಾ ತನ್ನ ದೆಹಲಿಯಿಂದ ಮಾಸ್ಕೋಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಿದೆ. ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ಭಾರತ ಬೆದರಿಕೆಗಳನ್ನು ಗ್ರಹಿಸಿದ್ದು, ದೆಹಲಿ-ಮಾಸ್ಕೋ ವಿಮಾನವನ್ನು ರದ್ದುಗೊಳಿಸಿದೆ. ಈಗಾಗಲೇ ವಿಮಾನದ ಟಿಕೇಟ್ಗಳನ್ನು ಖರೀದಿಸಿದ್ದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ಭರವಸೆ ನೀಡಿದೆ. ರಷ್ಯಾದ ರಾಯಭಾರ ಕಚೇರಿ ಈ ಬಗ್ಗೆ ಟೆಲಿಗ್ರಾಮ್ ಮೂಲಕ ಮಾಹಿತಿ