ಕೀವ್ : ರಷ್ಯಾ-ಉಕ್ರೇನ್ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಸೇನೆ ಉಕ್ರೇನ್ನ 202 ಶಾಲೆ ಮತ್ತು 34 ಆಸ್ಪತ್ರೆಯನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.ಕೀವ್ ನಗರದ 202 ಶಾಲೆ, 34 ಆಸ್ಪತ್ರೆ ಮತ್ತು 1,500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾ ಸೇನೆ ಕ್ಷಿಪಣಿ, ರಾಕೆಟ್ ದಾಳಿಯ ಮೂಲಕ ಧ್ವಂಸ ಮಾಡಿದೆ. ಅಲ್ಲದೇ ಉಕ್ರೇನ್ನಲ್ಲಿರುವ 900ಕ್ಕೂ ಅಧಿಕ ವಸತಿ ಕಟ್ಟಡಗಳಲ್ಲಿ ನೀರು, ಕರೆಂಟ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ರಷ್ಯಾ ದಾಳಿಗೆ ಖಾರ್ಕೀವ್