ನವದೆಹಲಿ: ವಾಯ್ಸ್ ಅಸಿಸ್ಟೆಂಟ್ ಎಂದೇ ಹೆಸರಾಗಿರುವ ದನಿಯಾಧಾರಿತ ವಿದ್ಯುನ್ಮಾನ ಉಪಕರಣ ಅಮೇಜಾನ್ ಸಂಸ್ಥೆಯ ಅಲೆಕ್ಸಾ ಇನ್ನು ಮುಂದೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ದನಿಯಲ್ಲಿ ಮಾತನಾಡಲಿದೆ. ಕೆಲ ಸಮಯದ ಹಿಂದೆ ಅವರು ತಮ್ಮ ದನಿಗೆ ಕಾಪಿ ರೈಟ್ ಪಡೆಯಲು ಮುಂದಾಗಿದ್ದರು. ಉದ್ಯಮದಲ್ಲಿ ಅವರ ಅನುಮತಿ ಪಡೆಯದೆಯೇ ಮಿಮಿಕ್ರಿ ಕಲಾವಿದರಿಂದ ಅವರ ದನಿಯನ್ನು ನಕಲು ಮಾಡಿ ಜಾಹೀರಾತುಗಳನ್ನು ತಯಾರಿಸಲಾಗಿತ್ತು. ಆಗ ಅದರ ವಿರುದ್ಧ ಅಮಿತಾಭ್ ಕಿಡಿ ಕಾರಿ ತಮ್ಮ ದನಿಗೆ ಕಾಪಿ