ರಿಪಬ್ಲಿಕ್ ಬ್ಯಾಂಕ್ ದಿವಳಿ ಅಂಚಿಗೆ ಸಿಲುಕಿದ ಹಿನ್ನೆಲೆ ಕ್ಯಾಲಿಫೋರ್ನಿಯಾದ ಹಣಕಾಸು ಸಂರಕ್ಷಣೆ ಹಾಗೂ ನಾವೀನ್ಯತೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸಂಕಷ್ಟಕ್ಕೆ ಸಿಲುಕಿದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಅನ್ನು ಜೆಪಿ ಮೊರ್ಗಾನ್ ಚೇಸ್ ಅಂಡ್ ಕಂಪನಿಗೆ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಆಸ್ತಿ ಮತ್ತು ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್ ಕಂಪನಿ ನೋಡಿಕೊಳ್ಳುವುದರಿಂದ ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ. 1985ರಲ್ಲಿ ಪ್ರಾಂಭವಾದ ರಿಪಬ್ಲಿಕ್ ಬ್ಯಾಂಕ್ ಶ್ರೀಮಂತರನ್ನು ಗುರಿಯಾಗಿರಿಸಿಕೊಂಡು ಉತ್ತಮ ಸೇವೆಗಳನ್ನು ಒದಗಿಸುತ್ತಿತ್ತು.