ನವದೆಹಲಿ: ಭಾರತದೊಂದಿಗಿನ ಸ್ನೇಹ ಹಸ್ತವನ್ನು ಮತ್ತಷ್ಟು ವಿಸ್ತರಿಸುವ ದೊಡ್ಡಣ್ಣ ಅಮೆರಿಕಾ ಭಾರತೀಯ ಸೇನೆಯ ಆಧುನೀಕರಣಕ್ಕೆ ಸಹಾಯ ಮಾಡಲು ಮುಂದಾಗಿದೆ. ಅಮೆರಿಕಾದ ಸೇನೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಭರವಸೆ ನೀಡಿದ್ದಾರೆ. ಉಭಯ ದೇಶಗಳೂ ಕೈ ಜೋಡಿಸಿದರೆ ಸೇನೆ ಮತ್ತಷ್ಟು ಆಧುನೀಕರಣಕ್ಕೊಳಗಾಗಲಿದೆ ಎಂದು ಸೇನಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಚೀನಾ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ವಿಚಾರದಲ್ಲೂ ಭಾರತಕ್ಕೆ ಅಮೆರಿಕಾ ಅಭಯ ನೀಡಿತ್ತು. ಕೆಲವು ಆಧುನಿಕ ಶಸ್ತ್ರಾಸ್ತ್ರಗಳು, ವಾಹನಗಳ ಖರೀದಿಗೆ ಅಮೆರಿಕಾ ಸಹಾಯ ಮಾಡಲು