ಕೀವ್ : ಉಕ್ರೇನ್ ಮೇಲೆ ರಷ್ಯಾ ಪಡೆಗಳು ರಣಹದ್ದುಗಳಂತೆ ಮುಗಿಬಿದ್ದು ಭಾರೀ ವಿಧ್ವಂಸ ಸೃಷ್ಟಿಸುತ್ತಿವೆ.ಎರಡು ದಿನಗಳಿಂದ ಭಾರೀ ದಾಳಿ ನಡೆಯುತ್ತಿದ್ದು, ರಷ್ಯಾ-ಉಕ್ರೇನ್ ಸೈನಿಕರ ಜೊತೆಗೆ ನಾಗರೀಕರ ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.ಪ್ರಧಾನ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ದಾಳಿ ಮುಂದುವರೆಸಿವೆ. ಸರ್ಕಾರಿ ಆಸ್ತಿಗಳು, ಕಚೇರಿಗಳ ಜೊತೆ ಜೊತೆಗೆ ಈಗ ಪೌರರನ್ನು ಗುರಿಯಾಗಿಸಿಕೊಂಡು ವಿಧ್ವಂಸಕಾಂಡ ಸೃಷ್ಟಿಸ್ತಿದೆ. ಆಸ್ಪತ್ರೆಗಳು, ಶಾಲೆಗಳನ್ನು ಉಡೀಸ್ ಮಾಡುತ್ತಿದೆ.ಡ್ರುಬಿ ನರೋದಿವ್ ಮೆಟ್ರೋ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದು, ಅಪಾರ