ಕಾಬೂಲ್: ಅಮೆರಿಕದ ಹೆಸರು ಕೇಳಿದರೆ ಉರಿದು ಬೀಳುವ ಅಘ್ಘಾನಿಸ್ತಾನದಲ್ಲಿ ಒಬ್ಬರು ತಮ್ಮ ಮಗನಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ಇಟ್ಟಿದ್ದಾರಂತೆ. ಅಮೆರಿಕಾದ ಅಧ್ಯಕ್ಷ ಟ್ರಂಪ್ ಮೇಲಿರುವ ಅಭಿಮಾನದಿಂದ ತಮ್ಮ ಮಗನಿಗೆ ಟ್ರಂಪ್ ಎಂದು ನಾಮಕರಣ ಮಾಡಲಾಗಿದೆ ಎಂದು ಮಗುವಿನ ತಂದೆ ಸಯೀದ್ ಅಸಾದುಲ್ಲ ಪೊಯಾ ಅವರು ಹೇಳಿದ್ದಾರೆ. ಫೇಸ್ ಬುಕ್ ನಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಕ್ಕೆ ಕಿಡಿಗೇಡಿಗಳು ಸಯೀದ್ ಅಸಾದುಲ್ಲ ಅವರಿಗೆ ಸಾಕಷ್ಟು ಬೆದರಿಕೆಗಳನ್ನು ಹಾಕಿದ್ದಾರಂತೆ. ಈ ಆರೋಪ