ನವದೆಹಲಿ: ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಬಳಿಕ ಪುಟ್ಟ ರಾಷ್ಟ್ರ ಭೂತಾನ್ ಮೇಲೆ ಕಣ್ಣು ಹಾಕಿದ್ದ ಅವಕಾಶವಾದೀ ಚೀನಾಗೆ ಪುಟ್ಟ ರಾಷ್ಟ್ರ ಭೂತಾನ್ ತಕ್ಕ ತಿರುಗೇಟು ನೀಡಿದೆ. ಭೂತಾನ್ ತನ್ನ ಗಡಿ ಭಾಗದಲ್ಲಿ ನಿರ್ಮಿಸಲು ಹೊರಟಿದ್ದ ವನ್ಯ ಜೀವಿ ಕೇಂದ್ರ ನಿರ್ಮಾಣವನ್ನು ಆಕ್ಷೇಪಿಸಿದ್ದ ಚೀನಾ ಇದು ವಿವಾದಿತ ಪ್ರದೇಶವಾಗಿದ್ದು ಇಲ್ಲಿ ಹೊಸ ಯೋಜನೆಯನ್ನು ಭೂತಾನ್ ಕೈಗೊಳ್ಳುವಂತಿಲ್ಲ ಎಂದು ತಗಾದೆ ತೆಗೆದಿತ್ತು.ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭೂತಾನ್ ನಾವು ನಿರ್ಮಿಸ