Widgets Magazine

ಎರಡನೇ ಎಲಿಜಬೆತ್ ಗೆ ಬಿಗ್ ಶಾಕ್; ರಾಜಮನೆತನ ತೊರೆಯಲು ಮುಂದಾದ ಹ್ಯಾರಿ, ಮೇಘನಾ

ಬ್ರಿಟನ್| pavithra| Last Modified ಶುಕ್ರವಾರ, 10 ಜನವರಿ 2020 (06:19 IST)
ಬ್ರಿಟನ್ : ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇದು  ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಗೆ ಶಾಕ್ ನೀಡಿದೆಯಂತೆ.ಹೌದು. ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನಾ ರಾಜಮನೆತನದ  ಹಿರಿಯ ಸ್ಥಾನದಿಂದ ಕೆಳಗಿಳಿಯುವ ಮಾಡಿದ್ದಾರಂತೆ. ಉತ್ತರ ಅಮೇರಿಕಾದಲ್ಲಿ ಹೆಚ್ಚಿನ ಸಮಯ  ಕಳೆಯುತ್ತಿರುವ ಈ ದಂಪತಿ ರಾಜಮನೆತನದಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.


ಇವರ ಈ ನಿರ್ಧಾರ  ರಾಣಿ ಎರಡನೇ ಎಲಿಜಬೆತ್ ಗೆ ಶಾಕ್ ನೀಡಿದ್ದು, ಅವರು ಈ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂಬುದಾಗಿ ರಾಜಮನೆತನದ ಮೂಲಗಳಿಂದ ತಿಳಿದುಬಂದಿದೆ.

ಇದರಲ್ಲಿ ಇನ್ನಷ್ಟು ಓದಿ :