27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಿಲ್ ಗೇಟ್ಸ್

ನ್ಯೂಯಾರ್ಕ್| Krishnaveni K| Last Modified ಮಂಗಳವಾರ, 4 ಮೇ 2021 (10:20 IST)
ನ್ಯೂಯಾರ್ಕ್: ವಿಶ್ವದ ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಪತ್ನಿ ಮಿಲಿಂದಾ ಜೊತೆಗಿನ 27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.
 

ಇಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಬಿಲ್ ಗೇಟ್ಸ್ ದಂಪತಿ ಘೋಷಿಸಿದ್ದಾರೆ. ಆದರೆ ಇಬ್ಬರೂ ಸೇರಿ ಹುಟ್ಟು ಹಾಕಿದ ಸಮಾಜಮುಖೀ ಕೆಲಸಗಳನ್ನು ಮಾಡುತ್ತಿರುವ ದತ್ತಿ ಸಂಸ್ಥೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
 
ಸಾಕಷ್ಟು ಯೋಚಿಸಿ ನಾವು ನಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ನಿರ್ಧರಿಸಿದ್ದೇವೆ. ಆದರೆ ವೃತ್ತಿಪರವಾಗಿ, ನಾವು ಹುಟ್ಟು ಹಾಕಿದ ಫೌಂಡೇಷನ್ ಕೆಲಸಗಳನ್ನು ಜೊತೆಯಾಗಿಯೇ ಮುಂದುವರಿಸಲಿದ್ದೇವೆ ಎಂದು ಬಿಲ್ ಗೇಟ್ಸ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :