ಮಲತಂದೆಯ ಜೊತೆಗೆ ಸಂಬಂಧ ಹೊಂದಿದ ಪ್ರೇಯಸಿಗೆ ಬೆಂಕಿ ಇಟ್ಟ ಪ್ರಿಯತಮ!

ಅಮೇರಿಕಾ| pavithra| Last Modified ಸೋಮವಾರ, 7 ಡಿಸೆಂಬರ್ 2020 (07:37 IST)
ಅಮೇರಿಕಾ : 53 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಮಲತಂದೆಯ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಆಕೆಗೆ ಬೆಂಕಿ ಹಚ್ಚಿದ ಘಟನೆ ಅಮೇರಿಕಾದ ಪ್ಲೋರಿಡಾದಲ್ಲಿ ನಡೆದಿದೆ.

ಆರೋಪಿ ಸಂತ್ರಸ್ತ ಮಹಿಳೆಯನ್ನು ಪ್ರೀತಿಸುತ್ತಿದ್ದರು. ಮಹಿಳೆ ತನ್ನ ಕುಟುಂಬದ ಜೊತೆ ವಾಸವಾಗಿದ್ದು, ತಾಯಿ ಅನಾರೋಗ್ಯಕ್ಕೊಳಗಾದ ಹಿನ್ನಲೆಯಲ್ಲಿ ತನ್ನ ಮಲತಂದೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದುಕೊಂಡ ಆರೋಪಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :