ಲಂಡನ್ : ಚೀನಾದ ವೀಡಿಯೋ ಅಪ್ಲಿಕೇಶನ್ ಟಿಕ್ಟಾಕ್ ಅನ್ನು ಬ್ರಿಟನ್ ಸಂಸತ್ತು ನಿಷೇಧಿಸಿದೆ. ಭದ್ರತಾ ಕಾಳಜಿಯ ಹಿನ್ನೆಲೆ ಬ್ರಿಟನ್ ಸಂಸತ್ತು ತನ್ನ ನೆಟ್ವರ್ಕ್ನಲ್ಲಿರುವ ಎಲ್ಲಾ ಸಾಧನಗಳಿಂದಲೂ ಟಿಕ್ಟಾಕ್ ಅನ್ನು ನಿರ್ಬಂಧಿಸಿದೆ. ಈ ಹಿಂದೆಯೇ ಭಾರತ ಇಡೀ ದೇಶದಲ್ಲಿ ಟಿಕ್ಟಾಕ್ ಅನ್ನು ಬ್ಯಾನ್ ಮಾಡಿದೆ. ಇದೀಗ ಬ್ರಿಟನ್ ಸಂಸತ್ತು ಭದ್ರತಾ ಕಾರಣಕ್ಕೆ ಟಿಕ್ಟಾಕ್ ಅನ್ನು ನಿಷೇಧಿಸಿದೆ. ಹೌಸ್ ಆಫ್ ಕಾಮನ್ಸ್ ಹಾಗೂ ಲಾರ್ಡ್ಸ್ ಎರಡೂ ಆಯೋಗಗಳು ಟಿಕ್ಟಾಕ್ ಅನ್ನು ಎಲ್ಲಾ ಸಂಸದೀಯ