ಕೀವ್ : ರಷ್ಯಾ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ಗೆ ಯುರೋಪಿಯನ್ ಯೂನಿಯನ್ ಅಭ್ಯರ್ಥಿ ಸ್ಥಾನ ನೀಡಿದೆ.ಯುರೋಪಿಯನ್ ಯೂನಿಯನ್ ನಾಯಕರು ಗುರುವಾರ ಉಕ್ರೇನ್ ಹಾಗೂ ಮಾಲ್ಡೋವಾಗೆ ಅಭ್ಯರ್ಥಿ ಸ್ಥಾನವನ್ನು ನೀಡಿದ್ದಾರೆ.ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ 4 ದಿನಗಳ ಬಳಿಕ ಫೆಬ್ರವರಿ 28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ತಕ್ಷಣವೇ ಒಕ್ಕೂಟದ ಸದಸ್ಯ ಸ್ಥಾನ ನೀಡುವಂತೆ ಕೋರಿಕೊಂಡಿದ್ದರು.ಬಳಿಕ ಉಕ್ರೇನ್ಗೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಜೂನ್ 17ರಂದು ಯುರೋಪಿಯನ್ ಕಮಿಷನ್ ಶಿಫಾರಸು ಮಾಡಿತ್ತು.