Widgets Magazine

ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲ; ವ್ಯಂಗ್ಯ ಮಾಡಿದ ಪಾಕ್ ಸಚಿವ

ಪಾಕಿಸ್ತಾನ| pavithra| Last Modified ಶನಿವಾರ, 7 ಸೆಪ್ಟಂಬರ್ 2019 (10:59 IST)
: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಈ ಬಗ್ಗೆ ಪಾಕ್ ಸಚಿವರೊಬ್ಬರು ಹಾಗೂ ಪ್ರಧಾನಿ ಮೋದಿಯ ಕಾಲೆಳೆದು ವ್ಯಂಗ್ಯ ಮಾಡಿದ್ದಾರೆ.
ಲ್ಯಾಂಡರ್ ವಿಕ್ರಂ ಚಂದ್ರನ ಮೇಲ್ಮೈ ಸ್ಪರ್ಶಿಸುವ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿದ್ದು, ವಿಜ್ಞಾನಿಗಳಲ್ಲಿ ನಿರಾಸೆ ಮೂಡಿದೆ. ಈ ಸನ್ನಿವೇಶವನ್ನು ರಾತ್ರಿಯಿಡಿ ವೀಕ್ಷಣೆ ಮಾಡಿದ ಪಾಕ್ ಸಚಿವ ಫವಾದ್ ಹುಸೇನ್, ಯಾವ ಕೆಲಸ ಬರುವುದಿಲ್ಲವೋ ಅದನ್ನು ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಾರದು.. ಡಿಯರ್ ಎಂಡಿಯಾ’ ಎಂದು ಟ್ವೀಟ್ ಮೂಲಕ  ವ್ಯಂಗ್ಯ ಮಾಡಿದ್ದಾರೆ.


ಅಲ್ಲದೇ ಚಂದ್ರನಲ್ಲಿ ಇಳಿಯಬೇಕಿದ್ದ ‘ಆಟಿಕೆ’ ಮುಂಬೈ ಮೇಲೆ ಬಿದ್ದಿದೆ ಎಂದು ಲೇವಡಿ  ಮಾಡಿದ್ದಾನೆ. ಹಾಗೇ ಪ್ರಧಾನಿ ಮೋದಿಯವರನ್ನೂ ಫವಾದ್ ಹುಸೇನ್ ಲೇವಡಿ ಮಾಡಿದ್ದಾನೆ. ಫವಾದ್ ಹುಸೇನ್ ನ ವಿರುದ್ಧ  ಭಾರತೀಯ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :