ನವದೆಹಲಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಂಗವಾಗುವ ಯಾವುದೇ ಕೆಲಸ ಮಾಡಬೇಡಿ. ಗಡಿ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬೇಡಿ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ.ಇತ್ತೀಚೆಗೆ ಗಡಿಯಲ್ಲಿ ಭಾರತ ತನ್ನ ರಕ್ಷಣೆಗಾಗಿ ರಫೇಲ್ ಯುದ್ಧವಿಮಾನ ಸೇರಿದಂತೆ ಹಗಲು-ರಾತ್ರಿ ಕಾವಲು ಪಡೆ ನಿಯೋಜಿಸಿರುವುದು, ಕಟ್ಟೆಚ್ಚರ ವಹಿಸಿರುವ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದಲ್ಲಿರುವ ಚೀನಾ ರಾಯಭಾರಿ ಜಿ ರೋಂಗ್ ಭಾರತವೂ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಬೇಕು.