ನವದೆಹಲಿ: ಒಂದೆಡೆ ಭಾರತದ ವಿರುದ್ಧ ಗಡಿ ತಂಟೆ ಮಾಡಲು ನೇಪಾಳವನ್ನು ಛೂ ಬಿಟ್ಟ ಚೀನಾ ಇನ್ನೊಂದೆಡೆ ಆ ದೇಶದ ಭೂಮಿಯನ್ನೇ ಕಬಳಿಸುವ ಮೂಲಕ ಟೋಪಿ ಹಾಕಿದೆ. ಬಿಹಾರದಲ್ಲಿ ಬೇಕೆಂದೇ ಗಡಿ ತಕರಾರು ತೆಗೆದಿರುವ ನೇಪಾಳ ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ. ಇದಕ್ಕೆಲ್ಲಾ ಚೀನಾ ಕುಮ್ಮಕ್ಕು ಕಾರಣ ಎನ್ನಲಾಗಿದೆ. ಆದರೆ ಇನ್ನೊಂದೆಡೆ ಚೀನಾ ಅದೇ ನೇಪಾಳದ ಡ್ರ್ಯಾಗನ್ 10 ಹಳ್ಳಿಗಳನ್ನು ರಸ್ತೆ ನಿರ್ಮಾಣ ಹೆಸರಿನಲ್ಲಿ ಕಬಳಿಸಿವೆ.ಇದನ್ನು ನೋಡಿಯೂ ನೇಪಾಳ ಸರ್ಕಾರ ಕಣ್ಮುಚ್ಚಿ ಕುಳಿತಿದೆ.