ಭಾರತದೊಂದಿಗೆ ಒಪ್ಪಂದ ಮಾಡಿಕೊಂಡು ತಾನೇ ಮುರಿದ ಚೀನಾ

ನವದೆಹಲಿ| Krishnaveni K| Last Modified ಸೋಮವಾರ, 25 ಜನವರಿ 2021 (07:46 IST)
ನವದೆಹಲಿ: ಪೂರ್ವ ಲಡಾಖ್ ನಲ್ಲಿ ಶಾಂತಿ ಸ್ಥಾಪನೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ತಾನೇ ಮುರಿದುಕೊಂಡ ಚೀನಾ ಇಲ್ಲಿ ಸೇನೆ ಜಮಾವಣೆ ಆರಂಭಿಸಿದೆ.
 > ಉಭಯ ದೇಶಗಳ ಸೈನಿಕರ ನಡುವೆ ಇಲ್ಲಿ ಘರ್ಷಣೆ ನಡೆದ ಬಳಿಕ ವಿಶ್ವಾಸವೃದ್ಧಿಗಾಗಿ ಚೀನಾವೇ ಶಾಂತಿ ಸ್ಥಾಪನೆ ಮಾಡಲು ಒಪ್ಪಂದಕ್ಕೆ ಮುಂದಾಗಿತ್ತು. ಇದನ್ನು ಉಭಯ ದೇಶಗಳೂ ಒಪ್ಪಿಕೊಂಡಿದ್ದವು. ಆದರೆ ಈಗ ಚೀನಾವೇ ಆ ಒಪ್ಪಂದ ಮುರಿದುಕೊಂಡಿದ್ದು, ಇಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಿದೆ. ಅಲ್ಲದೆ ಸೇನೆಯ ಚಟುವಟಿಕೆಗಳನ್ನೂ ಇಲ್ಲಿ ಚುರುಕುಗೊಳಿಸಿದೆ. ಈ ಮೂಲಕ ತನ್ನ ಮಾತನ್ನು ತಾನೇ ಮುರಿದಿದೆ.>


ಇದರಲ್ಲಿ ಇನ್ನಷ್ಟು ಓದಿ :