ನವದೆಹಲಿ(ಜು.16): ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಸೇನೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಾಕೀತು ಮಾಡಿದ ಮರುದಿನವೇ, ಪೂರ್ವ ಲಡಾಖ್ ಸೇರಿದಂತೆ ಇನ್ನಿತರ ಗಡಿ ಪ್ರದೇಶಗಳಲ್ಲಿ ಚೀನಾ ತನ್ನ ಸೈನ್ಯಕ್ಕಾಗಿ ಕಿಲೋಮೀಟರ್ಗಟ್ಟಲೇ ಪ್ರದೇಶದಲ್ಲಿ ಕಾಂಕ್ರೀಟ್ ಬಳಸಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.* ಪೂರ್ವ ಲಡಾಖ್, ಅರುಣಾಚಲ, ನಾಕುಲಾ ಪಾಸ್ ಬಳಿ ನಿರ್ಮಾಣ * ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ