ಮುಂಬೈ: ಕಳೆದ ವರ್ಷ ಮುಂಬೈ ನಗರವಿಡೀ ಒಂದು ದಿನದ ಮಟ್ಟಿಗೆ ವಿದ್ಯುತ್ ಕೈಕೊಟ್ಟು ಪರದಾಡಿದ ಸ್ಥಿತಿ ಎಲ್ಲೆಡೆ ಸುದ್ದಿಯಾಗಿತ್ತು. ಅಂದು ಆ ರೀತಿ ಆಗಲು ಕಾರಣ ಚೀನಾ ಎಂಬುದು ಈಗ ಬೆಳಕಿಗೆ ಬಂದಿದೆ!ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಚೀನಾ ಭಾರತದ ವಿರುದ್ಧ ಸೈಬರ್ ಅಟ್ಯಾಕ್ ಕೂಡಾ ಮಾಡುತ್ತಿದೆ. ಕಳೆದ ಅಕ್ಟೋಬರ್ ನಲ್ಲಿ ಮುಂಬೈನಲ್ಲಿ ವಿದ್ಯುತ್ ಕೈಕೊಡಲು ಚೀನಾವೇ ಕಾರಣ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ವಿದ್ಯುತ್ ಸಮಸ್ಯೆ ನಿವಾರಿಸಿದ