ಭಾರತೀಯರ ಪಾಸ್ ಪೋರ್ಟ್ ರದ್ದುಗೊಳಿಸಿ ಚೀನಾ ಕಾಟ

ಬೀಜಿಂಗ್| Krishnaveni K| Last Modified ಗುರುವಾರ, 31 ಡಿಸೆಂಬರ್ 2020 (10:24 IST)
ಬೀಜಿಂಗ್: ಕೊರೋನಾ ನೆಪ ಹೇಳಿ ಬೀಜಿಂಗ್ ಗೆ ತೆರಳಬೇಕಿದ್ದ ಕೆಲವು ಭಾರತೀಯರ ಪಾಸ್ ಪೋರ್ಟ್ ರದ್ದುಗೊಳಿಸಿ ಚೀನಾ ಕಾಟ ನೀಡಿದೆ.

 
ಭಾರತದಿಂದ ವಿಬಿಎನ್ ಫ್ಲೈಟ್ ಮೂಲಕ ವುಹಾನ್ ಗೆ ಬಂದಿಳಿದ ಕೆಲವು ಭಾರತೀಯರು ಬೀಜಿಂಗ್ ಗೆ ತೆರಳಬೇಕಿತ್ತು. ಆದರೆ ಇವರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ 28 ದಿನಗಳ ಕ್ವಾರಂಟೈನ್ ಗೆ ಅಲ್ಲಿನ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಈ ಭಾರತೀಯರು ಈಗಾಗಲೇ 50 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಇವರ ಕೊರೋನಾ ವರದಿ ನೆಗೆಟಿವ್ ಬಂದರೂ ಪಾಸ್ ಪೋರ್ಟ್ ಮೇಲೆ ಕೆಂಪು ಮಾರ್ಕ್ ತೆಗೆಯದೇ ಅಲ್ಲಿನ ಅಧಿಕಾರಿಗಳು ಬೀಜಿಂಗ್ ಗೆ ತೆರಳದಂತೆ ಆಟವಾಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದು ಚೀನಾದ ಧೂರ್ತ ಬುದ್ಧಿಗೆ ಇನ್ನೊಂದು ಉದಾಹರಣೆ ಎಂದರೂ ತಪ್ಪಾಗಲಾರದು.
ಇದರಲ್ಲಿ ಇನ್ನಷ್ಟು ಓದಿ :