ನವದೆಹಲಿ: ವಿವಾದಿತ ಡೋಕ್ಲಾಂ ಗಡಿಯಲ್ಲಿ ಮತ್ತೆ ಚೀನಾ ಸೇನೆ ತನ್ನ ರಹಸ್ಯ ಕಾರ್ಯಾಚರಣೆ ಮುಂದುವರಿಸಿದೆ. ವಿವಾದಿತ ಸ್ಥಳದಿಂದ ಕೆಲವೇ ಕಿ.ಮೀ. ದೂರದಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಚೀನಾ ಯೋಧರು ಬೀಡು ಬಿಟ್ಟಿದ್ದು ಆತಂಕ ಸೃಷ್ಟಿಸಿದ್ದಾರೆ. ರಸ್ತೆ ಅಗಲೀಕರಣ ನೆಪದಲ್ಲಿ ವಿವಾದಿತ ಸ್ಥಳದಿಂದ 12 ಕಿಮೀ ದೂರದಲ್ಲಿ ಚೀನಾ ಯೋಧರು ಭಾರೀ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ವಾಯುಸೇನಾ ಮುಖ್ಯಸ್ಥ ಧನೋವಾ ಹೇಳಿದ್ದಾರೆ.ಉಭಯ ಸೇನೆಗಳು ಇದುವರೆಗೆ ಎದುರಾಗಿಲ್ಲ. ಆದರೆ ಚುಂಬಿ ವ್ಯಾಲಿಯಲ್ಲಿ