ಸಾಲ ತೀರಿಸಲು ಪಾಕಿಸ್ತಾನಕ್ಕೆ ಚೀನಾ ನೆರವು

ಬೀಜಿಂಗ್| Krishnaveni K| Last Modified ಸೋಮವಾರ, 14 ಡಿಸೆಂಬರ್ 2020 (10:52 IST)
ಬೀಜಿಂಗ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ನೆರವು ನೀಡುತ್ತಿದೆ. ಭಾರತದ ವಿರುದ್ಧ ಗಡಿಯಲ್ಲಿ ಹುನ್ನಾರ ನಡೆಸಲು ಚೀನಾಗೆ ಪಾಕ್ ಸಹಾಯ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಪಾಕಿಸ್ತಾನದ ಸಾಲ ತೀರಿಸಲು ಚೀನಾ ನೆರವಾಗುತ್ತಿದೆ.
 

ಸೌದಿ ಅರೇಬಿಯಾದಿಂದ ಪಾಕ್ ಪಡೆದಿದ್ದ 2 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಚೀನಾ ಸಹಾಯ ಮಾಡಲಿದೆ. 2 ಬಿಲಿಯನ್ ಡಾಲರ್ ಪೈಕಿ 1.5 ಬಿಲಿಯನ್ ಡಾಲರ್ ಹಣವನ್ನು ಚೀನಾ ಪಾಕ್ ಗೆ ನೀಡಲಿದೆ. ಈ ಮೂಲಕ ಸಾಲದ ಕೂಪದಲ್ಲಿರುವ ಪಾಕಿಸ್ತಾನ ಸೌದಿ ರಾಷ್ಟ್ರಕ್ಕೆ 1 ಬಿಲಿಯನ್ ಡಾಲರ್ ನಷ್ಟು ಸಾಲ ಮರುಪಾವತಿ ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :