Widgets Magazine

ನೇರ ಯುದ್ಧ ಅಸಾಧ್ಯವೆಂದು ಭಾರತವನ್ನು ಹಣಿಯಲು ಹೊಸ ತಂತ್ರ ಮಾಡಿರುವ ಚೀನಾ

ನವದೆಹಲಿ| Krishnaveni K| Last Modified ಶುಕ್ರವಾರ, 31 ಜುಲೈ 2020 (09:52 IST)
ನವದೆಹಲಿ: ನೇರವಾಗಿ ಭಾರತೀಯ ಸೈನಿಕರ ವಿರುದ್ಧ ಹೋರಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಈಗ ಕುಟಿಲ ಬುದ್ಧಿಯ ನೆರೆಯ ರಾಷ್ಟ್ರ ಚೀನಾಕ್ಕೆ ಅರಿವಾಗಿದೆ. ಹೀಗಾಗಿ ಅದೀಗ ಪರೋಕ್ಷ ಯುದ್ಧ ಆರಂಭಿಸಿದೆ.
 

ಭಾರತದ ಪಾಲಿಗೆ ಮಿತ್ರ ರಾಷ್ಟ್ರವಾಗಿದ್ದ ನೇಪಾಳವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಚೀನಾ ಇದೀಗ ಭೂತಾನ್,  ಬಾಂಗ್ಲಾದೇಶ, ಅಫ್ಘಾನಿಸ್ತಾನವನ್ನೂ ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದೆ. ಈ ರಾಷ್ಟ್ರಗಳ ವಿದೇಶಾಂಗ ಇಲಾಖೆಯೊಂದಿಗೆ ಸಭೆ ನಡೆಸಿ ಭಾರತದ ವಿರುದ್ಧ ಕತ್ತಿ ಮಸೆಯುವ ತಂತ್ರ ರೂಪಿಸಿದೆ. ರಾಜತಾಂತ್ರಿಕವಾಗಿ ಭಾರತವನ್ನು ನೆರೆಹೊರೆಯ ರಾಷ್ಟ್ರಗಳಿಂದ ದೂರ ಮಾಡಿ ಏಕಾಂಗಿಯಾಗಿಸುವ ತಂತ್ರ ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :