ನವದೆಹಲಿ: ತಾನು ಗಡಿ ಖ್ಯಾತೆ ತೆಗೆಯುತ್ತಿರುವುದಲ್ಲದೆ ನೆರೆಯ ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟುವುದರಲ್ಲಿ ಚೀನಾ ಪ್ರಧಾನ ಪಾತ್ರ ವಹಿಸಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತಹ ಸಾಕ್ಷ್ಯ ಸಿಕ್ಕಿದೆ. ಕಳೆದ ಕೆಲವು ತಿಂಗಳುಗಳಿಂದ ನೇಪಾಳದಲ್ಲಿರುವ ಚೀನಾ ರಾಯಭಾರಿ ಹೌ ಯಾಂಕಿ ಸತತವಾಗಿ ನೇಪಾಳದ ಪ್ರಧಾನಿ ಕಚೇರಿಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಅವರು ಭಾರತದ ವಿರುದ್ಧ ಸಂಚು ರೂಪಿಸಲು ತಂತ್ರ ಹೆಣೆದಿರಬಹುದು ಎನ್ನಲಾಗಿದೆ. ಇದಾದ ಬಳಿಕವೇ ನೇಪಾಳ ಭಾರತದ ಜತೆಗಿನ ವಿವಾದಿತ ಪ್ರದೇಶ