ನವದೆಹಲಿ: ಗಲ್ವಾನ್ ವ್ಯಾಲಿ ಘರ್ಷಣೆ ಬಳಿಕ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದು ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಸರಿಸುವ ಮಾತುಕತೆಯಾಗಿತ್ತು. ಆದರೆ ಗಡಿಯಿಂದ ಹಿಂದೆ ಸರಿದಿರುವುದಾಗಿ ಹೇಳಿರುವ ಚೀನಾ ಲಿಬರೇಷನ್ ಆರ್ಮಿಯ ಬಣ್ಣ ಇದೀಗ ಬಯಲಾಗಿದೆ. ಪ್ಯಾನ್ ಗಾಂಗ್, ಡೆಪ್ಸಾಂಗ್ ಮತ್ತು ಗೋಗ್ರಾ ಪ್ರದೇಶದಿಂದ ಚೀನಾ ಸೇನೆ ಇನ್ನೂ ಹಿಂದೆ ಸರಿದಿಲ್ಲ. ಫಿಂಗರ್ 8 ಮತ್ತು ಫಿಂಗರ್ 4 ರಿಂದ ಹಿಂದೆ ಸರಿದ ಚೀನಾ ಫಿಂಗರ್ 5 ರಲ್ಲಿ ಬೀಡುಬಿಟ್ಟಿತ್ತು.