ಬೀಜಿಂಗ್: ಡೋಕ್ಲಾಂ ಗಡಿಯಿಂದ ಸೇನೆ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಚೀನಾ ಅಂತಿಮ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾ ಈ ಬಗ್ಗೆ ಭಾರತಕ್ಕೆ ಕಡೇ ಎಚ್ಚರಕೆ ನೀಡಲಿದೆ. ನಿಗದಿತ ದಿನದೊಳಗೆ ಸೇನೆ ಹಿಂಪಡೆಯದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಭಾರತವೇ ಹೊಣೆಯಾದೀತು ಎಂದು ಚೀನಾ ಎಚ್ಚರಿಕೆ ನೀಡಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ.ಚೀನಾದ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಆಧರಿಸಿ