ನವದೆಹಲಿ: ಇಂದಿನಿಂದ ರಷ್ಯಾ ಮತ್ತು ಭಾರತದ ಸೇನಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸ ಆರಂಭಿಸಲಿದ್ದು, ನೆರೆಯ ಚೀನಾಕ್ಕೆ ನಡುಕ ಹುಟ್ಟಿಸಿದೆ. ಇಂದ್ರ 2017 ಹೆಸರಿನಲ್ಲಿ ರಷ್ಯಾದ ವ್ಲಾಡಿವೋಸ್ಟೋಕ್ ನೌಕಾ ನೆಲೆಯಲ್ಲಿ ಉಭಯ ದೇಶಗಳ ಸೈನಿಕರು ಜಂಟಿಯಾಗಿ ಅಭ್ಯಾಸ ನಡೆಸಲಿವೆ. ಈ ಬೆಳವಣಿಗೆ ಮೇಲೆ ಚೀನಾ ಹದ್ದಿನಗಣ್ಣಿರಿಸಿದೆ.ಈ ಅಭ್ಯಾಸದಲ್ಲಿ ನೌಕಾ ದಳ, ಭೂ ಸೇನೆ ಮತ್ತು ವಾಯುಸೇನೆ ಸೇರಿದಂತೆ ಮೂರೂ ದಳಗಳೂ ಭಾಗವಹಿಸಲಿವೆ. ಸುಮಾರು 400 ಭಾರತೀಯ ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.