ನವದೆಹಲಿ: ಅಧಿಕಾರಿಗಳ ಮಟ್ಟದ ಸಭೆಗೂ ಮುನ್ನವೇ ಲಡಾಖ್ ಗಡಿಯಲ್ಲಿ ಚೀನಾ ಕೊಂಚ ಮೃದು ಧೋರಣೆ ಅನುಸರಿಸಿದೆ. ಈ ಮೂಲಕ ಶಾಂತಿ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಿದೆ.ವಾಸ್ತವ ರೇಖೆಗಿಂತ ಚೀನಾ ಸೇನೆ 2 ಕಿ.ಮೀ. ಹಿಂದೆ ಸರಿದಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಕೂಡಾ 1 ಕಿ.ಮೀ. ಹಿಂದಡಿಯಿಟ್ಟಿದೆ. ನಾಳೆ ಉಭಯ ದೇಶಗಳ ಲೆಫ್ಟಿನೆಂಟ್ ಜನರಲ್ ಅಧಿಕಾರಿಗಳ ಮಟ್ಟದ ಮಾತುಕತೆ ನಡೆಯಲಿದೆ.ವಿವಾದಿತ ಪ್ರದೇಶವಾಗಿರುವ ಪ್ಯಾಂಗ್ಯಾಂಗ್ ಸರೋವರ ದಡದಲ್ಲೇ ಮಾತುಕತೆ ನಡೆಯಲಿದೆ. ಭಾರತದ