ಅಂಚೆ ಚೀಟಿಯಲ್ಲಿ ಪಾತಕಿ ಛೋಟಾ ರಾಜನ್ ಫೋಟೋ!

ನವದೆಹಲಿ| Krishnaveni K| Last Modified ಮಂಗಳವಾರ, 29 ಡಿಸೆಂಬರ್ 2020 (09:28 IST)
ನವದೆಹಲಿ: ಕೇಂದ್ರ ಸರ್ಕಾರ ಮೈ ಪೋಸ್ಟ್ ಯೋಜನೆಯಲ್ಲಿ ವೈಯಕ್ತಿಕ ಫೋಟೋ ಇರುವ ಅಂಚೆ ಚೀಟಿ ಪಡೆಯಬಹುದಾಗಿದೆ. ಆದರೆ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಮುನ್ನ ಭಜರಂಗಿ ಫೋಟೋಗಳಿರುವ ಅಂಚೆ ಚೀಟಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಅಂಚೆ ಇಲಾಖೆ ತನಿಖೆಗೆ ಆದೇಶಿಸಿದೆ.
 

ಈ ಅಂಚೆ ಚೀಟಿಗಳನ್ನು ಮುದ್ರಿಸಿದವರು ಯಾರು ಎಂದು ಅಂಚೆ ಇಲಾಖೆ ತನಿಖೆ ನಡೆಸಲು ಮುಂದಾಗಿದೆ. ಈ ರೀತಿಯ ವ್ಯಕ್ತಿಗತ ಅಂಚೆ ಚೀಟಿಯ ಮುಖಬೆಲೆ ಒಂದಕ್ಕೆ 5 ರೂ.ಗಳಷ್ಟಿರುತ್ತದೆ. ಈಗ ಭೂಗತ ಪಾತಕಿಗಳ ಚಿತ್ರಗಳಿರುವ ಅಂಚೆ ಚೀಟಿಗಾಗಿ 600 ರೂ. ಅಂಚೆ ಇಲಾಖೆಗೆ ಪಾವತಿ ಮಾಡಲಾಗಿದೆ. ಈ ಕಿಡಿಗೇಡಿ ಕೃತ್ಯ ನಡೆಸಿದವರ ಪತ್ತೆ ಕಾರ್ಯ ನಡೆಯುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :