ಹವಾಮಾನ ಬದಲಾವಣೆ, ರಕ್ಷಣೆ: ನರೇಂದ್ರ ಮೋದಿ, ಬೋರಿಸ್ ಮಾತುಕತೆ

ನವದೆಹಲಿ| Ramya kosira| Last Modified ಮಂಗಳವಾರ, 12 ಅಕ್ಟೋಬರ್ 2021 (09:28 IST)
ನವದೆಹಲಿ : ನರೇಂದ್ರ ಮೋದಿ ಅವರು ಸೋಮವಾರ(ಅಕ್ಟೋಬರ್ 11) ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಉಭಯ ನಾಯಕರು ಭಾರತ, ಬ್ರಿಟನ್ ನ 2030ರ ಅಜೆಂಡಾ, ಹವಾಮಾನ ಬದಲಾವಣೆ ಮತ್ತು ಅಫ್ಘಾನಿಸ್ತಾನ ಪರಿಸ್ಥಿತಿ ಕುರಿತು ಚರ್ಚಿಸಿರುವುದಾಗಿ ವರದಿ ತಿಳಿಸಿದೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಮಾತನಾಡಲು ತುಂಬಾ ಸಂತೋಷವಾಯಿತು. ನಾವು ಭಾರತ ಮತ್ತು ಬ್ರಿಟನ್ ನ 2030ರ ಅಜೆಂಡಾದ ಪ್ರಗತಿಯನ್ನು ಪರಿಶೀಲಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗ್ಲಾಸ್ಕೋದಲ್ಲಿ ನಡೆಯಲಿರುವ ಸಿಒಪಿ 26 ಶೃಂಗಸಭೆ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆ, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿರುವುದಾಗಿ ಪ್ರಧಾನಿ ಮೋದಿ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದಾರೆ.
ಡೌನಿಂಗ್ ಸ್ಟ್ರೀಟ್ ಪ್ರಕಟಣೆ ಪ್ರಕಾರ, ಭಾರತ ಮತ್ತು ಬ್ರಿಟನ್ ಪ್ರಧಾನಿ ಉಭಯ ದೇಶಗಳ ವ್ಯವಹಾರ, ರಕ್ಷಣಾ ವ್ಯವಹಾರದ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದೆ. ಗ್ಲಾಸ್ಕೋದಲ್ಲಿ ನಡೆಯಲಿರುವ ಸಿಪಿಒ 26 ಶೃಂಗಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.
 
ಇದರಲ್ಲಿ ಇನ್ನಷ್ಟು ಓದಿ :