ಬೀಜಿಂಗ್ : ಚೀನಾಗೆ ಬರುವ ಪ್ರವಾಸಿಗರಿಂದ ಚೀನಾದಲ್ಲಿ ಇದ್ದಕ್ಕಿದ್ದಂತೆ ಕೊವಿಡ್ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಬೇರೆ ದೇಶಗಳಿಗೆ ಚೀನಾದಿಂದ ಹೋಗುವ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಚೀನಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ಕೊರೊನಾ ಸೋಂಕು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶ್ವದಾದ್ಯಂತ ಕೊರೊನಾ ಲಸಿಕೆಗಳನ್ನು ನೀಡುತ್ತಿರುವುದರಿಂದ ಕೊವಿಡ್ ಕೇಸುಗಳು ಕಡಿಮೆಯಾಗುತ್ತಿವೆ. ಆದರೆ, ಚೀನಾದಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಪ್ರಪಂಚದಲ್ಲಿ ಕೊರೊನಾ ಲಾಕ್ಡೌನ್ ನಿಯಮಗಳು ಸಡಿಲವಾಗುತ್ತಿದ್ದರೂ ಚೀನಾದಲ್ಲಿ