ಎವರೆಸ್ಟ್ ಪರ್ವತ ತಲುಪಿದ ಕೊರೋನಾ

ನವದೆಹಲಿ| Krishnaveni K| Last Modified ಶುಕ್ರವಾರ, 7 ಮೇ 2021 (10:39 IST)
ನವದೆಹಲಿ: ಮೌಂಟ್ ಎವರೆಸ್ಟ್ ತುದಿಗೆ ತಲುಪಿದವರನ್ನೂ ಕೊರೋನಾ ಬಿಟ್ಟಿಲ್ಲ! ಎವರೆಸ್ಟ್ ಏರಲು ಹೊರಟ ಪರ್ವತಾರೋಹಿಗಳಲ್ಲೂ ಸೋಂಕು ಕಾಣಿಸಿಕೊಂಡಿದೆ.

 

ನೇಪಾಳದ ಬೇಸ್ ಕ್ಯಾಂಪ್ ನಲ್ಲಿ ಬೀಡುಬಿಟ್ಟಿದ್ದ ಕೆಲವರಲ್ಲಿ ಸೋಂಕು ದೃಢಪಟ್ಟಿದೆ. ಅಧಿಕಾರಿಗಳ ಪ್ರಕಾರ ಇಲ್ಲಿ ಕೊರೋನಾ ಸೋಂಕು ಬಾರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾಗಿದ್ದರೂ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.
 
ಕೆಲವು ಮೂಲಗಳ ಪ್ರಕಾರ ಈಗಾಗಲೇ ಸುಮಾರು ಪರ್ವಾತಾರೋಹಣ ಮಾಡಬೇಕಿದ್ದ 30 ಮಂದಿಯನ್ನು ಸೋಂಕಿನ ಲಕ್ಷಣವಿದ್ದ ಕಾರಣಕ್ಕೆ ಕಠ್ಮಂಡುವಿಗೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ. ಆದರೆ ನೇಪಾಳ ಸರ್ಕಾರ ಯಾವುದನ್ನೂ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :