ಗುಳಿಗೆ ರೂಪದಲ್ಲೂ ಬರಲಿದೆ ಕೊರೋನಾ ವ್ಯಾಕ್ಸಿನ್

ನವದೆಹಲಿ| Krishnaveni K| Last Modified ಗುರುವಾರ, 8 ಏಪ್ರಿಲ್ 2021 (13:34 IST)
ನವದೆಹಲಿ: ಕೊರೋನಾ ಲಸಿಕೆ ಪಡೆದುಕೊಳ್ಳಲು ಇಂಜೆಕ್ಷನ್ ಪಡೆಯಬೇಕಾಗುತ್ತದಲ್ಲಾ ಎಂದು ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ.

 
ಕೊರೋನಾ ವ್ಯಾಕ್ಸಿನ್ ಗುಳಿಗೆ ರೂಪದಲ್ಲಿ ಬರುವ ಕಾಲ ದೂರವಿಲ್ಲ. ಲಾಸ್ ಏಂಜಲೀಸ್ ಲ್ಯಾಕರ್ಸ್ ಸಂಸ್ಥೆ ಗುಳಿಗೆ ರೂಪದ ವ್ಯಾಕ್ಸಿನ್ ತಯಾರಿಸಲು ಮುಂದಾಗಿದೆ. ಇದರ ಪ್ರಯೋಗ ಹಂತ ಜಾರಿಯಲ್ಲಿದೆ.
 
ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಕೊರೋನಾ ವ್ಯಾಕ್ಸಿನ್ ಗುಳಿಗೆ ರೂಪದಲ್ಲಿ ಬರಲಿದೆ. ಕೊಠಡಿ ತಾಪಮಾನದಲ್ಲಿ ಇರಿಸಬಲ್ಲ ಗುಳಿಗೆ ತಯಾರಿಯಲ್ಲಿ ಸಂಸ್ಥೆ ತೊಡಗಿದೆಯಂತೆ. ಆದರೆ ಇದು ಇಂಜೆಕ್ಷನ್ ನಷ್ಟೇ ಪವರ್ ಫುಲ್ ಆಗಿರಬಹುದೇ ಎಂದು ಸಂಶೋಧನೆಯಿಂದ ತಿಳಿದುಬರಬೇಕಷ್ಟೇ.
ಇದರಲ್ಲಿ ಇನ್ನಷ್ಟು ಓದಿ :