Widgets Magazine

ಕೊರೊನಾವೈರಸ್ ಭೀತಿಯಿಂದ ತಮ್ಮ ವಿಡಿಯೋ ಕಾಲ್ ಮೂಲಕವೇ ಮದುವೆಯಾದ ವಧೂವರ!

ನವದೆಹಲಿ| Krishnaveni K| Last Updated: ಶುಕ್ರವಾರ, 7 ಫೆಬ್ರವರಿ 2020 (13:01 IST)
ನವದೆಹಲಿ: ವಿಶ್ವದಾದ್ಯಂತ ಕೊರೋನಾವೈರಸ್ ಜ್ವರದ ಭೀತಿ ಆವರಿಸಿದ್ದರೆ, ಸಿಂಗಾಪುರದಲ್ಲಿ ಇದೇ ಕಾರಣಕ್ಕೆ ಮದುಮಗ-ಮದುಮಗಳಿಲ್ಲದೇ ಮದುವೆ ನೆರವೇರಿದೆ!

 
ಅಸಲಿಗೆ, ಈ ನವ ಜೋಡಿಗಳಾದ ಜೊಸೆಫ್ ಯೂ ಮತ್ತು ಕಾಂಗ್ ಟಿಂಗ್ ಇತ್ತೀಚೆಗಷ್ಟೇ ಚೀನಾ ಪ್ರವಾಸ ಮಾಡಿದ್ದರು. ಹೇಳಿ ಕೇಳಿ ಚೀನಾದಲ್ಲಿ ಈಗ ಎಲ್ಲೆಡೆ ಕೊರೋನಾವೈರಸ್ ಹರಡಿದೆ.
 
ಹೀಗಾಗಿ ಮುನ್ನಚ್ಚರಿಕೆಯ ಕ್ರಮವಾಗಿ ವಿವಾಹ ಮಂಟಪದಿಂದ ದೂರ ಉಳಿದ ಇವರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿವಾಹದ ಪದ್ಧತಿಗಳನ್ನು ಪೂರ್ತಿ ಮಾಡಿದ್ದಾರೆ! ಅಂದರೆ ಇವರಿಬ್ಬರ ವಿವಾಹಕ್ಕೆ ಮಂಟಪದಲ್ಲಿ ನೆಂಟರಿಷ್ಟರೆಲ್ಲಾ ಇದ್ದರೂ ವಧೂ ವರನೇ ಇರಲಿಲ್ಲ!
ಇದರಲ್ಲಿ ಇನ್ನಷ್ಟು ಓದಿ :