ಟೋಕಿಯೊ : ಜಪಾನ್ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಸುಮಾರು 6 ಸಾವಿರದಷ್ಟಿದ್ದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದ್ದು, ಲಸಿಕೆ ಅಭಿಯಾನವೇ ಇದಕ್ಕೆಲ್ಲ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಜನರು ಎರಡು ಡೋಸ್ನ ಲಸಿಕೆ ಪಡೆದಿದ್ದಾರೆ. ಸೋಂಕು ಕುಸಿತದ ಹಿಂದೆ ಲಸಿಕೆಯ ಪರಿಣಾಮವಿದೆ. ಇದು ಅತ್ಯಂತ ದೊಡ್ಡಮಟ್ಟದಲ್ಲಿ ಪಾತ್ರ ವಹಿಸಿದೆ. ಅಲ್ಲದೇ ಜನರಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿರುವ ಸಾಧ್ಯತೆಯನ್ನು