ಲಂಡನ್, ಸೆ.30 : ಧೂಮಪಾನವು ಕೊರೋನ ಸೋಂಕಿನ ತೀವ್ರತೆಯನ್ನು ಮತ್ತು ಸಾವನ್ನಪ್ಪುವ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಬ್ರಿಟನ್ನಲ್ಲಿ ನಡೆಸಿರುವ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಥೊರಾಕ್ಸ್ ನಿಯತಕಾಲಿಕದಲ್ಲಿ ಸೋಮವಾರ ಪ್ರಕಟವಾದ ವರದಿಯು, ಧೂಮಪಾನಿಗಳಲ್ಲಿ ಕೊರೋನ ಸೋಂಕಿನ ತೀವ್ರತೆ ಕಡಿಮೆ ಎಂಬ ಈ ಹಿಂದಿನ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಆಕ್ಸ್ಫರ್ಡ್ ವಿವಿಯ ತಂಡವೊಂದು ವೀಕ್ಷಣೆ ಮತ್ತು ಅನುವಂಶಿಕ ಅಂಕಿಅಂಶ , ಪ್ರಾಥಮಿಕ ಆರೋಗ್ಯ ಕೇಂದ್ರದ ದಾಖಲೆಗಳು, ಕೊರೋನ ಸೋಂಕು ಪರೀಕ್ಷೆಯ ಫಲಿತಾಂಶ,