ವಾಷಿಂಗ್ಟನ್ : ವಿಚ್ಛೇದನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪಾಕಿಸ್ತಾನ ಮೂಲದ ಮಹಿಳೆ ತನ್ನ ಪತಿಯಿಂದ ಹತ್ಯೆಗೀಡಾಗಿರುವ ಘಟನೆ ಚಿಕಾಗೊದಲ್ಲಿ ನಡೆದಿದೆ.ಸಾನಿಯಾ ಖಾನ್ (29) ಹತ್ಯೆಯಾದ ಮಹಿಳೆ. ಪಾಕಿಸ್ತಾನಿ ಅಮೆರಿಕನ್ ಸಾನಿಯಾ ಖಾನ್ ಅವರು ಈಚೆಗೆ ಚಿಕಾಗೊಗೆ ಬಂದಿದ್ದರು. ಮನೆಯಿಂದ ಹೊರಗಡೆ ಹೋಗುತ್ತಿದ್ದಾಗ ಆಕೆ ಮಾಜಿ ಪತಿ ರಹೀಲ್ ಅಹ್ಮದ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಚಿಕಾಗೋ ಪೊಲೀಸರು ಗಸ್ತಿನಲ್ಲಿದ್ದಾಗ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ.