ನೀವೂ ಹೇರ್ ಡೈ ಮಾಡಿಕೊಳ್ಳುತ್ತೀರಾ...? ಹಾಗಾದ್ರೆ ಇಲ್ಲಿದೆ ನೋಡಿ ಬೆಚ್ಚಿಬೀಳಿಸುವ ಸುದ್ದಿ

ಪ್ಯಾರಿಸ್, ಮಂಗಳವಾರ, 4 ಡಿಸೆಂಬರ್ 2018 (07:27 IST)

ಪ್ಯಾರಿಸ್ : ಹೇರ್ ಡೈ ಮಾಡಿಸಿಕೊಂಡ ಯುವತಿಯೊಬ್ಬಳ ತಲೆಯ ಇದ್ದಕ್ಕಿದ್ದಂತೆಯೆ ದುಪ್ಪಟ್ಟಾದ ವಿಚಿತ್ರ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.


ಹೌದು. 19 ವರ್ಷದ ಎಸ್ಟಿಲ್ ಎಂಬಾಕೆ ಈ ವಿಚಿತ್ರ ಘಟನೆಗೆ ಒಳಗಾದ ಯುವತಿ. ಈಕೆ  ಸ್ಥಳೀಯ ಮಾರ್ಕೆಟ್‌ನಿಂದ ಕೂದಲಿಗೆ ಹಚ್ಚಿಕೊಳ್ಳಲು ಹೇರ್ ಡೈ ಖರೀದಿಸಿ ನಂತರ ಆಕೆ ಡೈ ಪ್ಯಾಕೆಟ್‌ನಲ್ಲಿ ನೀಡಲಾದ ಸೂಚನೆಯಂತೆ ಬಣ್ಣವನ್ನು ತಲೆಗೆ ಹಚ್ಚಿಕೊಂಡಿದ್ದಾಳೆ.


ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಉಸಿರಾಡಲು ಕಷ್ಟವಾಗಿದ್ದು, ತಲೆಯಲ್ಲಿ ಸಹಿಸಲು ಅಸಾಧ್ಯವಾದ ತುರಿಕೆ ಕಾಣಿಸಿಕೊಂಡಿದೆ.  ಆದರೆ ಮರುದಿನ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಬೆಚ್ಚಿ ಬಿದ್ದಿದ್ದಾಳೆ. ಯಾಕೆಂದರೆ ಆಕೆಯ ತಲೆಯ ಗಾತ್ರ ಇದ್ದಕ್ಕಿದ್ದಂತೆ ದುಪ್ಪಟ್ಟಾಗಿದೆ. ತಲೆಯ ಸುತ್ತಳತೆ ತೆಗೆದಾಗ ಬರೋಬ್ಬರಿ 63 ಸೆಂ. ಮೀಟರ್ ಆಗಿದೆ. ಆಕೆಯ ತಲೆಯಷ್ಟೇ ಅಲ್ಲದೇ, ನಾಲಗೆ ಗಾತ್ರ ಹೆಚ್ಚಾಗಲಾರಂಭಿಸಿದೆ.


ಇದರಿಂದ ಭಯಗೊಂಡ ಆಕೆ ವೈದ್ಯರನ್ನು ಭೇಟಿಯಾದಾಗ ಹೆರ್ ಡೈನಲ್ಲಿದ್ದ PPD (Paraphenylenediamin) ಎಂಬ ಕೆಮಿಕಲ್‌ನಿಂದ ರಿಯಾಕ್ಷನ್ ಆಗಿದೆ ಎಂದು ತಿಳಿಸಿದ್ದಾರೆ. ಹೇರ್‌ಡೈನಲ್ಲಿರುವ PPDಹೆಸರಿನ ಕೆಮಿಕಲ್ ಸಾಮಾನ್ಯವಾಗಿ ಎಲ್ಲಾ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಸುತ್ತಾರೆ. ಆದರೆ ಎಸ್ಟಿಲ್ ಮಾಡಿದ ಎಡವಟ್ಟೆನೆಂದರೆ ಸೂಚನೆಯಲ್ಲಿ ತಿಳಿಸಿದ್ದಂತೆ ಪ್ಯಾಚ್‌ ಟೆಸ್ಟ್‌ನಲ್ಲಿ ಹೇರ್‌ಡೈ ಮಾಡಿ 48 ಗಂಟೆಗಳವರೆಗೆ ಯಾವುದೇ ರಿಯಾಕ್ಷನ್ ಆಗದಿದ್ದರೆ ತಲೆಗೆ ಹಚ್ಚಿಕೊಳ್ಳಲು ತಿಳಿಸಲಾಗಿತ್ತು. ಆದರೆ ಎಸ್ಟಿಲ್ ಟ್ರಯಲ್ ಮಾಡಿದ ಕೇವಲ 30 ನಿಮಿಷಗಳೊಳಗೆ ತಲೆಗೆ ಹಚ್ಚಿಕೊಂಡಿದ್ದಳು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಂಗಳಮುಖಿ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಪೊಲೀಸ್ ಪೇದೆ

ಚೆನ್ನೈ : ಪೊಲೀಸ್ ಪೇದೆಯೊಬ್ಬ ಪೊದೆಯಲ್ಲಿ ಮಂಗಳಮುಖಿ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಘಟನೆ ಚೆನ್ನೈ ನಲ್ಲಿ ...

news

ಮಾಜಿ ಸೈನಿಕ ಹಾಗೂ ಆತನ ಸ್ನೇಹಿತರಿಂದ ಬಾಲಕಿಯ ಮೇಲೆ ಅತ್ಯಾಚಾರ

ಆಂಧ್ರಪ್ರದೇಶ : ಮಾಜಿ ಸೈನಿಕನೊಬ್ಬ ಬಾಲಕಿಯ ಜೊತೆಗೆ ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ...

news

ಓಲಾ ಚಾಲಕನನ್ನು ಅಪಹರಿಸಿ, ಹಣಕ್ಕಾಗಿ ಆತನ ಪತ್ನಿಯನ್ನು ಬೆತ್ತಲೆಗೊಳಿಸಿದ ದುಷ್ಕರ್ಮಿಗಳು

ಬೆಂಗಳೂರು : ಪ್ರಯಾಣಿಕರಂತೆ ನಟಿಸಿ ಕಾರು ಹತ್ತಿದ ದುಷ್ಕರ್ಮಿಗಳು ಓಲಾ ಚಾಲಕನನ್ನು ಅಪಹರಿಸಿ, ಆತನ ...

news

ಭದ್ರಾ ಯೋಜನೆ: ಮರು ಶಂಕುಸ್ಥಾಪನೆಗೆ ತೀವ್ರ ವಿರೋಧ

ಭದ್ರಾ ಮೇಲ್ದಂಡೆ ಯೋಜನೆಯ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮರು ಶಂಕುಸ್ಥಾಪನೆಗೆ ...