Widgets Magazine

ಸುಲೆಮಾನಿ ಅಂತಿಮ ಯಾತ್ರೆಯ ವೇಳೆ ಕಾಲ್ತುಳಿತದಿಂದ ಸಾವಿಗೀಡಾದವರು ಎಷ್ಟು ಮಂದಿ ಗೊತ್ತಾ?

ಇರಾನ್| pavithra| Last Updated: ಬುಧವಾರ, 8 ಜನವರಿ 2020 (09:39 IST)
ಇರಾನ್ : ಅಮೇರಿಕಾದ ದಾಳಿಯಿಂದ ಹತ್ಯೆಯಾದ ಇರಾನ್ ಜನರಲ್ ಕಮಾಂಡರ್ ಖಾಸಿಂ ಸುಲೆಮಾನಿ ಅವರ ಪಾರ್ಥಿವ ಶರೀರದ  ಅಂತಿಮ ಯಾತ್ರೆಯ ವೇಳೆ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಶುಕ್ರವಾರ ಹತ್ಯೆಯಾದ ಸುಲೆಮಾನಿ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಅವರ ತವರೂರಾದ ಕೆರ್ಮನ್ ಪಟ್ಟಣಕ್ಕೆ ತರಲಾಗಿತ್ತು. ಆ ವೇಳೆ ಪಾರ್ಥಿವ ಶರೀರದ ಮೆರವಣೆಗೆಯ ವೇಳೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

 

ಈ ವೇಳೆ ಸಂಭವಿಸಿದ ನೂಕುನುಗ್ಗಲಿನಿಂದ ಹಲವು ಮಂದಿ ಕಾಲ್ತುಳಿತದಿಂದ ಗಾಯಗೊಂಡಿದ್ದು, 35ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ ಎಂದು ಇರಾನ್ ತುರ್ತು ಸೇವೆಯ ಮುಖ್ಯಸ್ಥ ಪಿರೋಸ್ಸೈನ್ ಕೂಲಿವಂಡ್ ನ್ಯೂಸ್ ಚಾನೆಲ್ ಗೆ ತಿಳಿಸಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :