ಸಂಚಾರಿ ನಿಯಮ ಉಲ್ಲಂಘಿಸಿದ ತಾತನಿಗೆ ಕೋರ್ಟ್ ದಂಡದ ಬದಲು ಮೆಚ್ಚುಗೆ ನೀಡಿದ್ದೇಕೆ ಗೊತ್ತಾ?

ಅಮೇರಿಕಾ, ಶನಿವಾರ, 10 ಆಗಸ್ಟ್ 2019 (08:55 IST)

ಅಮೇರಿಕಾ : ಸಾಮಾನ್ಯವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುತ್ತದೆ. ಆದರೆ ಅಮೇರಿಕಾದಲ್ಲಿ 96 ವರ್ಷದ ತಾತ ಸಂಚಾರಿ ನಿಯಮ ಉಲ್ಲಂಘಿಸಿದರೂ ಅವರಿಗೆ ದಂಡ ವಿಧಿಸದೆ  ಮೆಚ್ಚಿಗೆ ವ್ಯಕ್ತಪಡಿಸಿದೆ.ಹೌದು. ಅಮೆರಿಕಾದ  ಕೊಯೆಲ್ಲಾ ಎಂಬ ಹೆಸರಿನ 96 ವರ್ಷದ ತಾತ ರಸ್ತೆಯಲ್ಲಿ ಅದರಲ್ಲೂ ಶಾಲಾ ವಲಯದಲ್ಲಿ ಅತಿಯಾದ ಸ್ಪೀಡ್ ನಲ್ಲಿ ಕಾರನ್ನು ಚಲಾಯಿಸಿದ್ದಾರೆ. ಇವರಿಗೆ ಸ್ಪೀಡಿಂಗ್ ಟಿಕೆಟ್ ಕೊಟ್ಟ ಸಂಚಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

ಅಲ್ಲಿ ತಾತ ನ್ಯಾಯಧೀಶರ ಮುಂದೆ, ನನ್ನ ಮಗ ಅಂಗವಿಕಲ ಮತ್ತು ಕ್ಯಾನ್ಸರ್ ಪೀಡಿತನಾಗಿದ್ದು, ಆತನಿಗೆ ಪ್ರತಿ ಎರಡು ವಾರಗಳಿಗೊಮ್ಮೆ ರಕ್ತ ಬದಲಿಸಲು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಆದಕಾರಣ ಸ್ಪೀಡಾಗಿ ಕಾರನ್ನು ಚಲಾಯಿಸಿದ್ದೆ ಹೊರತು ಸಾಹಸ ಮಾಡಲು ಅಲ್ಲ ಎಂದು ನಿವೇದನೆ ಮಾಡಿಕೊಂಡಿದ್ದಾರೆ.

 

ಇದಕ್ಕೆ ಮರುಗಿದ ನ್ಯಾಯಾಧೀಶರು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ನೀವು ಉತ್ತಮ ವ್ಯಕ್ತಿ ಎಂದು ಹೊಗಳಿ ಯಾವುದೇ ದಂಡ ವಿಧಿಸದೇ ಕಳುಹಿಸಿದರು.ಇದಕ್ಕೆ ಸಂಬಂಧಪಟ್ಟ ವಿಡಿಯೋ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದ್ದು, ಹಲವರು ತಾತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಆಸ್ಪತ್ರೆಗೆ ದಾಖಲು

ನವದೆಹಲಿ : ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರನ್ನು ದೆಹಲಿಯ ಏಮ್ಸ್ ...

news

ಯುವಕ ಮಾಡಿದ ಆ ಕೆಲಸಕ್ಕೆ ಮರಕ್ಕೆ ಕಟ್ಟಿ ನೀಡಿದ್ರು ಧರ್ಮದೇಟು

ಯುವಕನೊಬ್ಬ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿರೋ ಘಟನೆ ನಡೆದಿದೆ.

news

ಸಚಿವ ಸಂಪುಟ ರಚನೆ ಮತ್ತೆ ಮುಂದೂಡಿಕೆ ಎಂದ ಶೋಭಾ ಕರಂದ್ಲಾಜೆ

ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟ ರಚನೆಯನ್ನು ಮುಂದೂಡಿಕೆ ಮಾಡಲಾಗಿದೆ ಅಂತ ಬಿಜೆಪಿ ಸಂಸದೆ ...

news

ನಿರಾಶ್ರಿತರಿಗೆ ಕನ್ನಡ ಸಂಘಟನೆಯವರು ಮಾಡಿದ್ದೇನು?

ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನೀರಿನಿಂದಾಗಿ ಸಂತ್ರಸ್ಥರಾಗಿರೋ ಜನರಿಗೆ ಕನ್ನಡಪರ ಮನಸ್ಸುಗಳು ...