ಫೇಸ್ ಬುಕ್ ಗೆಳತಿಯ ಜೊತೆ ಲೈಂಗಿಕ ಸಂಬಂಧ ಬೆಳೆಸಲು 350 ಮೈಲು ನಡೆದುಬಂದವನಿಗೆ ಆಗಿದ್ದೇನು ಗೊತ್ತಾ?

ನ್ಯೂಯಾರ್ಕ್| pavithra| Last Updated: ಶುಕ್ರವಾರ, 18 ಅಕ್ಟೋಬರ್ 2019 (09:52 IST)
ನ್ಯೂಯಾರ್ಕ್ : ವ್ಯಕ್ತಿಯೊಬ್ಬ ಫೇಸ್ ಬುಕ್ ಗೆಳತಿಯ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಆಕೆಗಾಗಿ ಬರೋಬರಿ 350 ಮೈಲು ನಡೆದುಕೊಂಡು ಬಂದು ಪೊಲೀಸರ ಕೈಗೆ ಸಿಲುಕಿಕೊಂಡ ಘಟನೆ ಅಮೇರಿಕಾದಲ್ಲಿ ನಡೆದಿದೆ.
32 ವರ್ಷ ವಯಸ್ಸಿನ ಟಾಮಿ ಲೀ ಜೆನಾಕಿಂಸ್ ಎಂಬಾತನಿಗೆ 14 ವರ್ಷದ ಬಾಲಕಿಯ ಜೊತೆ ಫೆಸ್ ಬುಕ್ ನಲ್ಲಿ ಗೆಳೆತನ ಬೆಳೆದಿದೆ. ಈತ ಆಕೆಗೆ ತನ್ನ ಜೊತೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಆಕೆ ಒಪ್ಪದಿದ್ದರೂ ಸಹ ಅವಳ ಜೊತೆ ಸಂಬಂಧ ಬೆಳೆಸಲು, ಆಕೆಯನ್ನು ಇಂಪ್ರೆಸ್ ಮಾಡಲು ಆತನಿದ್ದ ಇಂಡಿಯಾನಗರದಿಂದ ವಿಸ್ಕಾನ್ನಿಸ್ ವರೆಗೆ ಬರೋಬರಿ 350 ಮೈಲು ನಡೆದುಕೊಂಡೇ ಬಂದಿದ್ದಾನೆ.


ಆದರೆ ಈತ ಈ ಹಿಂದೆ ಇಬ್ಬರು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿ, ಬಳಿಕ ಹೊರಬಂದ ಮೇಲೆ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದರಿಂದ ಪೊಲೀಸರರು ಆತನ ಮೇಲೆ ಕಣ್ಣೀಟ್ಟಿದ್ದರಿಂದ ಆತನ ಮೇಲೆ ಅನುಮಾನಗೊಂಡು  ಬಂಧಿಸಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :