ಇಸ್ಲಾಮಾಬಾದ್|
pavithra|
Last Modified ಬುಧವಾರ, 26 ಸೆಪ್ಟಂಬರ್ 2018 (06:54 IST)
ಇಸ್ಲಾಮಾಬಾದ್ : ಇತ್ತೀಚೆಗೆ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಪ್ರೀತಿ ಮಾಡಿದ್ದಕ್ಕೆ ತಂದೆಯೇ ತನ್ನ ಮಗಳು ಮತ್ತು ಆಕೆಯ ಪ್ರೇಮಿಯ ತಲೆಯನ್ನು ಶಿರಚ್ಛೇದನ ಮಾಡಿರುವ ಘಟನೆ ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಚಿಕ್ಕ ಗ್ರಾಮವೊಂದರಲ್ಲಿ ನಡೆದಿದೆ.
18 ವರ್ಷ ವಯಸ್ಸಿನ ಹುಡುಗಿ ಹಾಗೂ 21 ವರ್ಷದ ಯುವಕನೊಬ್ಬ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಆ ಹುಡುಗ ಭಾನುವಾರದಂದು ಹುಡುಗಿಯನ್ನು ಆಕೆಯ ಮನೆಯಲ್ಲಿಯೇ ಭೇಟಿಯಾಗಿ ಮಾತನಾಡುತ್ತಿದ್ದನು. ಇದನ್ನು ನೋಡಿದ ಆಕೆಯ ತಂದೆ ಹಾಗೂ
ಚಿಕ್ಕಪ್ಪ ಇಬ್ಬರನ್ನು ಹಿಡಿದು
ಹಗ್ಗದಿಂದ ಕಟ್ಟಿ ಕುಟುಂಬದ ಗೌರವ ಕಾಪಾಡುವ ಸಲುವಾಗಿ ಕ್ರೂರವಾಗಿ ಇಬ್ಬರ ಶಿರಚ್ಛೇದನ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿದಂತೆ ಇಬ್ಬರು ಸಂಶಯಾಸ್ಪದರನ್ನು ಬಂಧಿಸಲಾಗಿದ್ದು, ಕೊಲೆ ಮಾಡಲು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ಡೌನ್ ಲೋಡ್ ಮಾಡಿಕೊಳ್ಳಿ.