ಅತಿಥಿಗಳ ಖಾಸಗಿ ಕ್ಷಣವನ್ನು ಸೆರೆ ಹಿಡಿದು ಪೊರ್ನ್​​ ವೆಬ್ ​ಸೈಟ್​ ಗೆ ಹಾಕುತ್ತಿದ್ದ ಆ ಹೋಟೆಲ್ ಎಲ್ಲಿದೆ ಗೊತ್ತಾ?

ಸಿಯೋಲ್, ಶುಕ್ರವಾರ, 22 ಮಾರ್ಚ್ 2019 (09:48 IST)

ಸಿಯೋಲ್ : ಹೋಟೆಲ್ ​ಗೆ ಬಂದು ತಂಗುವ ಅತಿಥಿಗಳ ಖಾಸಗಿ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಆ ವಿಡಿಯೋವನ್ನು ಪೊರ್ನ್​​ ವೆಬ್​ಸೈಟ್​ ಗೆ ಅಪ್ ಲೋಡ್ ಮಾಡುತ್ತಿದ್ದ ಪ್ರಕರಣವೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿದೆ.


ದಕ್ಷಿಣ ಕೊರಿಯಾದ 42 ಹೊಟೆಲ್​ ರೂಮ್​ಗಳಲ್ಲಿ ಇವರು ಕ್ಯಾಮರಾ ಫಿಕ್ಸ್​​ ಮಾಡಿದ್ದರು. ಆದರೆ ಅವರು ಕ್ಯಾಮರಾ ಫಿಕ್ಸ್ ಮಾಡುತ್ತಿದ್ದದ್ದು ಗೊಡೆಗಾಗಲಿ ಅಥವಾ ಬಾತ್​ರೂಮ್ ​ನಲ್ಲಾಗಲಿ ಅಲ್ಲ ಬದಲಾಗಿ ಟಿವಿ, ಹೇರ್​ ಡ್ರೈಯರ್​, ಗಡಿಯಾರ ಹೀಗೆ ಯಾರೂ ಊಹಿಸದೇ ಇರದ ಜಾಗದಲ್ಲಿ ಕ್ಯಾಮರಾಗಳನ್ನು ಅಡಗಿಸಿಡುತ್ತಿದ್ದರು.


ರೆಕಾರ್ಡ್​ ಮಾಡಿದ ವಿಡಿಯೋವನ್ನು ತಮ್ಮ ಆನ್​​ ಲೈನ್​ನಲ್ಲಿ ಹರಿಬಿಡುತ್ತಿದ್ದರು. ಹೀಗೆ ಇವರು ಬರೋಬ್ಬರಿ 800 ಜೋಡಿಗಳಿಗೆ ಈ ರೀತಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಯ ಕೂಡ ಬರುತ್ತಿತ್ತು. ಸದ್ಯ ಇದೀಗ ಇವರು ಪೊಲೀಸರ ಅತಿಥಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದುರ್ಘಟನೆ ಸ್ಥಳಕ್ಕೆ ಧಾರ್ಮಿಕ ಟೀಂ ಭೇಟಿ

ಧಾರವಾಡದಲ್ಲಿ ಕಟ್ಟಡ ಕುಸಿತವಾಗಿ ಹಲವರು ಬಲಿಯಾದ ಘಟನಾ ಸ್ಥಳಕ್ಕೆ ವಿವಿಧ ಧರ್ಮಗಳು ಗುರುಗಳು ಭೇಟಿ

news

ಸಚಿವ ಶಿವಳ್ಳಿ ಇನ್ನಿಲ್ಲ

ರಾಜ್ಯದ ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.

news

ಹೋಳಿ ಹಬ್ಬದಂದು ಘರ್ಷಣೆ: ಐವರು ಅರೆಸ್ಟ್

ಹೋಳಿ ಧುಲಂಡಿ ಆಚರಣೆ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧನ ...

news

ನಿಖಿಲ್ ಕುಮಾರಸ್ವಾಮಿ ಭಾಷಣಕ್ಕೆ ಮತದಾರರ ಅಡ್ಡಿ

ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಮತದಾರರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ.