ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಭಾರತದ ವಿರುದ್ಧ ಪದೇ ಪದೇ ಚೀನಾ ಕಿಡಿ ಕಾರುತ್ತಿದ್ದರೆ, ಭಾರತ ಮಾತ್ರ ಮೌನಕ್ಕೆ ಶರಣಾಗಿದೆ. ಆದರೆ ಭಾರತದ ಈ ಪ್ರಬುದ್ಧ ನಡೆಗೆ ದೊಡ್ಡಣ್ಣ ಅಮೆರಿಕಾ ಬೆಂಬಲ ಸಿಕ್ಕಿದೆ. ಇದು ಭಾರತದ ಪಾಲಿಗೆ ಸಕಾರಾತ್ಮಕ ಅಂಶವಾಗಲಿದೆ. ಗಡಿ ವಿಚಾರದಲ್ಲಿ ಚೀನಾ ಎಳಸು ಎಂದು ತೋರಿಸುತ್ತಿದೆ. ಆದರೆ ಭಾರತ ತನ್ನ ಗಡಿ ವಿಚಾರದಲ್ಲಿ ರಾಜಿಯೂ ಮಾಡಿಕೊಳ್ಳದೆ, ಇತ್ತ ವಿವಾದಕ್ಕೆ ಬೆಂಕಿ ಹಚ್ಚುವ ಕೆಲಸವನ್ನೂ ಮಾಡದೆ ಪ್ರಬುದ್ಧತೆ