ದುಬೈ ಪೊಲೀಸ್ ಪಡೆ ಸೇರಲಿದ್ದಾರೆ ರೋಬೊಟ್ ಪೊಲೀಸರು..!

ದುಬೈ| venu| Last Modified ಮಂಗಳವಾರ, 6 ಜೂನ್ 2017 (14:04 IST)
ಹೀಗೇನಿದ್ದರೂ ತಂತ್ರಜ್ಞಾನದ ಯುಗ. ಪ್ರತಿಯೊಂದರಲ್ಲೂ ತಂತ್ರಜ್ಞಾನ ಬಯಸುವ ಮಾನವ ಇದೀಗ ರೋಬೋಟ್ ಪೊಲೀಸ್ ಸೃಷ್ಟಿಗೂ ಮುಂದಾಗಿದ್ದಾನೆ. ದುಬೈ ಸರ್ಕಾರ ಕೆಲವೆಡೆ ಮನುಷ್ಯರ ಬದಲು ರೋಬೋಟ್`ಗಳನ್ನ ಪೊಲೀಸ್ ಕೆಲಸಕ್ಕೆ ನಿಯೋಜಿಸುವ ಯೋಜನೆ ರೂಪಿಸಿದೆ.
 

ಈ ಯೋಜನೆಗೆ ರೋಬೋಕಾಪ್ ಎಂದು ಹೆಸರಿಡಲಾಗಿದ್ದು, ಪ್ರಯೋಗ ಸಹ ಯಶ ಕಂಡಿದೆ. 2030ರ ವೇಳೆ ಶೇ.25ರಷ್ಟು ಪೊಲೀಸ್ ವ್ಯವಸ್ಥೆ ರೋಬೋಗಳಿಂದ ಭರ್ತಿಯಾಗಲಿದೆ. ಪೊಲೀಸರ ರೀತಿಯೇ ಸಮವಸ್ತ್ರ ಧರಿಸಿ ಡ್ಯೂಟಿ ಮಾಡಲಿರುವ ರೋಬೋಟ್, ಹ್ಯಾಂಡ್ ಶೇಕ್, ಸಲ್ಯೂಟ್ ಮಾಡುತ್ತದೆ. ಕರಾರುವಾಕ್ ಆಗಿ ಕ್ರಿಮಿನಲ್`ಗಳನ್ನ ಗುರ್ತಿಸುತ್ತದೆ.

ರೋಬೋಟ್`ಗಳ ಅನುಕೂಲಗಳೆಂದರೆ, ಸಂಬಳ ಕೊಡುವ ಹಾಗಿಲ್ಲ, ರಜೆ, ವೀಕ್ ಆಫ್, ಹೆರಿಗೆ ರಜೆ, ಅನಾರೋಗ್ಯ ರಜೆ ಈ ರೀತಿ ಯಾವುದೇ ರಜೆ ಕೊಡುವ ಅಗತ್ಯವಿಲ್ಲ. 24 ಗಂಟೆ ದಣಿವಿಲ್ಲದೆ ಕೆಲಸ ಮಾಡುತ್ತವೆ ಎನ್ನುತ್ತಾರೆ ಬ್ರಿಗೇಡಿಯರ್ ಖಾಲಿದ್ ನಸರ್ ಅಲ್ ರಜೂಕಿ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

//kannada.
fantasycricket.webdunia.com/ಇದರಲ್ಲಿ ಇನ್ನಷ್ಟು ಓದಿ :