ಅಕ್ರಮ ಸಂಬಂಧ ಮುಚ್ಚಿಡಲು ಬಾಡಿಗಾರ್ಡ್ ಗೆ ಕೋಟಿ ಹಣ ಸುರಿದಿದ್ದ ದುಬೈ ದೊರೆಯ ಮಾಜಿ ಪತ್ನಿ

ಲಂಡನ್| Krishnaveni K| Last Modified ಮಂಗಳವಾರ, 24 ನವೆಂಬರ್ 2020 (09:08 IST)
ಲಂಡನ್: ಬ್ರಿಟಿಷ್ ಮೂಲದ ಬಾಡಿಗಾರ್ಡ್ ಜತೆಗೆ ಅಕ್ರಮ ಸಂಬಂಧ ಮುಚ್ಚಿಡಲು ದುಬೈ ದೊರೆಯ ಮಾಜಿ ಪತ್ನಿ ಪ್ರಿನ್ಸ್ ಹಯಾ ಸುಮಾರು 12 ಕೋಟಿ ಹಣ ಸುರಿದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
 

ದೊರೆ ಶೇಕ್ ಮೊಹಮ್ಮದ್ ಅಲ್ ಮುಖ್ತಮ್ ನಾಲ್ಕನೇ ಪತ್ನಿಯಾಗಿದ್ದ ಹಯಾ ಎರಡು ವರ್ಷಗಳ ಕಾಲ ಬ್ರಿಟಿಷ್ ಬಾಡಿಗಾರ್ಡ್ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಆದರೆ ಇದನ್ನು ಯಾರಿಗೂ ಬಹಿರಂಗಪಡಿಸಿದಂತೆ ಆತನಿಗೆ 12 ಕೋಟಿ ರೂ. ಮತ್ತು ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಿದ್ದಳು. ತಮ್ಮಿಬ್ಬರ ವಿಚಾರ ಗೊತ್ತಿದ್ದ ಮತ್ತಿಬ್ಬರು ಕೆಲಸಗಾರರಿಗೂ ಇದೇ ರೀತಿ ದುಬಾರಿ ಮೊತ್ತದ ಹಣ ನೀಡಿ ಬಾಯಿಮುಚ್ಚಿಸಿದ್ದಳು. ಆದರೆ ಈ ವಿಚಾರ ಬೆಳಕಿಗೆ ಬಂದ ಹಿನ್ನಲೆಯಲ್ಲಿ ದೊರೆ ಪತ್ನಿಗೆ ವಿಚ್ಛೇದನ ನೀಡಿದ್ದು, ಈಗ ಮಕ್ಕಳನ್ನು ಯಾರ ವಶಕ್ಕೊಪ್ಪಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಈ ಘಟನೆಯ ವಿವರ ಎಲ್ಲರೆದುರು ಬಯಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :