ಪ್ರಬಲ ಭೂಕಂಪಕ್ಕೆ 135 ಜನರು ಬಲಿ

ನವದೆಹಲಿ| Krishnaveni| Last Modified ಸೋಮವಾರ, 13 ನವೆಂಬರ್ 2017 (08:46 IST)
ನವದೆಹಲಿ: ಇರಾನ್-ಇರಾಖ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 135 ಕ್ಕೂ ಹೆಚ್ಚು ಜನ ಬಲಿಯಾಗಿದ್ದು, 1500 ಮಂದಿಗೆ ಗಾಯಗಳಾದ ವರದಿಯಾಗಿದೆ.
 
ನಿನ್ನೆ ತಡರಾತ್ರಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.3 ರಷ್ಟು ತೀವ್ರತೆ ದಾಖಲಾಗಿದೆ. ಉತ್ತರ ಇರಾಖ್ ನ ಸುಲೈಮಾನಿಯಾದಲ್ಲಿ ಅತೀ ಹೆಚ್ಚು ಹಾನಿಗಳಾಗಿವೆ. ರಾಖ್ ಗೆ ಸೇರಿದ ಭಾಗದಲ್ಲಿ 6 ಮಂದಿ ಸಾವಿಗೀಡಾದ ವರದಿಯಾಗಿದೆ.
 
ರಾತ್ರಿ ವೇಳೆ ಜನರು ಮನೆಯೊಳಗಿದ್ದ ವೇಳೆಯಲ್ಲೇ ಸಂಭವಿಸಿರುವುದರಿಂದ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :