ವಾಷಿಂಗ್ಟನ್ : ಆರಂಭದಿಂದಲೂ ಟ್ವಿಟ್ಟರ್ನಲ್ಲಿ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್, ಒಂದು ದಿನಕ್ಕೆ ಟ್ವಿಟ್ಟರ್ನಲ್ಲಿ ಇಂತಿಷ್ಟೇ ಪೋಸ್ಟ್ಗಳನ್ನ ಓದಬಹುದು ಎಂದು ಮಿತಿ ವಿಧಿಸಿದ್ದರು. ಇದೀಗ ಮತ್ತೆ ಓದುವಿಕೆ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ. ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟ್ಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್ ಬದಲಾವಣೆಯ ಅಸ್ತ್ರ ಹೂಡಿದ್ದರು.ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್ಗಳ ಮೂಲಕ