ಕರಾಚಿ: ಮದುವೆಗಿಂತ ಮೊದಲೇ ಸೆಲ್ಫೀ ತೆಗೆಸಿಕೊಂಡ ತಪ್ಪಿಗೆ ಭಾವೀ ಅಳಿಯ ಮತ್ತು ಮಗಳನ್ನು ಮರ್ಯಾದೆ ಹೆಸರಿನಲ್ಲಿ ತಂದೆಯೇ ಕೊಲೆ ಮಾಡಿದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.ವಿಶೇಷವೆಂದರೆ ಈ ಜೋಡಿಗೆ ವಿವಾಹ ನಿಶ್ಚಿತಾರ್ಥವೂ ಮುಗಿದಿತ್ತು. ಹಾಗಿದ್ದರೂ ಮದುವೆಗಿಂತ ಮೊದಲು ಭೇಟಿ ಮಾಡುವುದು, ಸೆಲ್ಫೀ ತೆಗೆಸಿಕೊಳ್ಳುವ ಮೂಲಕ ಈ ನವಜೋಡಿ ಸಂಪ್ರದಾಯ ಮೀರಿದೆ ಎಂದು ತಂದೆ ಮಗಳಿಗೆ ವಿಷವುಣಿಸಿದರೆ, ಭಾವೀ ಅಳಿಯನನ್ನು ಗುಂಡಿಕ್ಕಿ ಕೊಂದಿದ್ದಾನೆ.ಬಳಿಕ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು ಎಂದು